ನವದೆಹಲಿ: ಇಂಡಿಗೋ ಏರ್ಲೈನ್ಸ್ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಗೆ ಸಂಚರಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಲಾಗಿದೆ.
37 ರೈಲುಗಳಿಗೆ ಹೆಚ್ಚುವರಿಗಾಗಿ 166 ಕೋಚ್ ಗಳನ್ನು ಅಳವಡಿಸಲಾಗಿದೆ. ವಿಮಾನಗಳ ಹಾರಾಟ ರದ್ದತಿಯಿಂದ ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಈ ಕುರಿತಾಗಿ ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಮುಖ ಘೋಷಣೆ ಮಾಡಲಾಗಿದೆ.
ರೈಲು ಸೇವೆಗಾಗಿ ಪ್ರಯಾಣಿಕರ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ದಕ್ಷಿಣ ರೈಲ್ವೆಯಿಂದ 18 ರೈಲುಗಳಿಗೆ ಅತಿ ಹೆಚ್ಚು ಬೋಗಿಗಳ ಸೇರ್ಪಡೆ ಮಾಡಲಾಗಿದೆ. 18 ರೈಲುಗಳಿಗೆ ಹೆಚ್ಚುವರಿಗಾಗಿ ಚೇರ್ ಕಾರ್, ಸ್ಲೀಪರ್ ಕ್ಲಾಸ್ ಕೋಚ್ ಸೇರ್ಪಡೆ ಮಾಡಲಾಗಿದೆ.
ಉತ್ತರ ರೈಲ್ವೆಯ 8 ರೈಲುಗಳಿಗೆ ಹೆಚ್ಚುವರಿಗಾಗಿ ಮೂರು ಎಸಿ, ಚೇರ್ ಕಾರ್ ಕೋಚ್ ಸೇರ್ಪಡೆ ಮಾಡಲಾಗಿದೆ.
ಪಶ್ಚಿಮ ರೈಲ್ವೆಯ ನಾಲ್ಕು ಪ್ರಮುಖ ರೈಲುಗಳಿಗೆ 3ಎಸಿ, 2ಎಸಿ ಕೋಚ್ ಸೇರ್ಪಡೆ ಮಾಡಲಾಗಿದ್ದು, ಇಂದಿನಿಂದ ಸೇವೆ ನೀಡಲಾಗುವುದು.
