ಬಾಗಲಕೋಟೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಿನಿ ಸಿಲಿಂಡರ್ ಗಳು ಸ್ಪೋಟಗೊಂಡ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಾಜಿ ಸರ್ಕಲ್ ಬಳಿ ನಡೆದಿದೆ.
ಸ್ಪೋಟದಿಂದ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಸ್ಪೋಟದ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಸ್ಪೋಟದಿಂದ ಇಡೀ ರಸ್ತೆಯಲ್ಲಿ ಬೆಂಕಿ ಆವರಿಸಿದ್ದು, ಇದನ್ನು ಕಂಡ ಜನರು, ಹೋಂ ಗಾರ್ಡ್ ಸಿಬ್ಬಂದಿ ಓಡಿ ಹೋಗಿದ್ದಾರೆ.
ದಾದಾಪೀರ್ ಜಮಾದಾರ ಅವರ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 5 ಕೆಜಿ ಸಿಲಿಂಡರ್ ಗಳು ಸ್ಪೋಟಗೊಂಡಿವೆ. ಮಾಹಿತಿ ತಿಳಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.