ಬೆಂಗಳೂರು : ಜನವರಿ 24 ರಿಂದ ಜೆ.ಇ.ಇ. ಮುಖ್ಯ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪೋಷಕರು/ವಿದ್ಯಾರ್ಥಿಗಳಿಂದ ಬಂದಿರುವ ಮನವಿಗಳನ್ವಯ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ 2024 ರಲ್ಲಿ ಜೆ.ಇ.ಇ. ಮುಖ್ಯ ಪರೀಕ್ಷೆಯು ದಿನಾಂಕ: 24-01-2024 ರಿಂದ 01-02-2024 ರವರೆಗೆ ನಡೆಯುತ್ತಿದೆ.
ಈ ಸಂಬಂಧ ಹಲವಾರು ವಿದ್ಯಾರ್ಥಿಗಳು/ಪೋಷಕರು ಸದರಿ ದಿನಗಳಂದು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿರುತ್ತಾರೆ. ಆದುದರಿಂದ ಜಿಲ್ಲಾ ಉಪನಿರ್ದೇಶಕರು ಪ್ರಾಯೋಗಿಕ ಕೇಂದ್ರಗಳಿಗೆ ಸೂಚನೆಯನ್ನು ನೀಡಿ ಜಿ.ಇ.ಇ. ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳು ಜೆ.ಇ.ಇ. ಮುಖ್ಯ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರಾಯೋಗಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಲಿಯು ನಿಗದಿಪಡಿಸಿರುವ ದಿನಾಂಕ: 27-01-2024 ರಿಂದ 17-02-2024 ರೊಳಗೆ ನಡೆಸಲು ತಿಳಿಸಿದೆ.