ಮಂಡ್ಯ: ಕಳ್ಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿರಣ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಬಂಧಿಸಲು ತೆರಳಿದ್ದ ಕಾನ್ಸ್ಟೇಬಲ್ ಮೇಲೆ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಸಿಪಿಐ ಶ್ರೀಧರ್ ಅವರು ಕಿರಣ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಲಗೂರು ಠಾಣೆ ಸಿಪಿಐ ಶ್ರೀಧರ್ ಅವರು ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಸಮೀಪ ಘಟನೆ ನಡೆದಿದೆ.
ಆಗಸ್ಟ್ 17ರಂದು ಕಿರುಗಾವಲು ಗ್ರಾಮದಲ್ಲಿ ಕಳ್ಳತನ ನಡೆದಿತ್ತು. ಮಹಾಲಕ್ಷ್ಮಿ ಜ್ಯುವೆಲರಿ ಶಾಪ್ ನಲ್ಲಿ ಚಿನ್ನಾಭರಣ ದೋಚಿದ್ದರು.
ಬೆಳಗಿನ ಜಾವ ಮೂರು ಗಂಟೆಗೆ ಗ್ಯಾಸ್ ಕಟರ್ ನಿಂದ ಶೆಟರ್ ಮುರಿದು ಕಳವು ಮಾಡಿದ್ದರು. 110 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಆಭರಣ ದೋಚಿದ್ದರು. ಕಳ್ಳತನ ಮಾಡುವುದನ್ನು ಪಕ್ಕದ ಹೋಟೆಲ್ ಮಾಲೀಕ ನೋಡಿದ್ದರು. ಈ ವೇಳೆ ಉಸಿರುಗಟ್ಟಿಸಿ ಮಾದಪ್ಪ(60) ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು. ಕಿರಣ್, ಆನಂದ್, ಶರತ್, ಶ್ರೀನಿವಾಸ, ಕೃಷ್ಣಾಚಾರಿ ಬಂಧಿತ ಆರೋಪಿಗಳು. ಆರೋಪಿಗಳು ಮಂಡ್ಯ ತಾಲೂಕಿನ ಈಚಗೆರೆ ಮತ್ತು ಕೊತ್ತತ್ತಿ ಗ್ರಾಮದವರಾಗಿದ್ದಾರೆ. ಕೇರಳದಲ್ಲಿಯೂ ವಾಹನ ಕಳ್ಳತನ ಪ್ರಕರಣದಲ್ಲಿ ಆನಂದ ಭಾಗಿಯಾಗಿದ್ದ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿ ಕಿರಣ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.