BREAKING : ಡಾ.ರಾಜ್’ಕುಮಾರ್ ಹುಟ್ಟುಹಬ್ಬಕ್ಕೆ ಗಿಫ್ಟ್ : ನಟ ಯುವ ರಾಜ್’ಕುಮಾರ್ ಅಭಿನಯದ ‘ಎಕ್ಕ’ ಚಿತ್ರದ ಟೀಸರ್ ರಿಲೀಸ್ |WATCH TEASER

ಬೆಂಗಳೂರು : ನಟ ಯುವ ರಾಜ್ ಕುಮಾರ್ ಅಭಿನಯದ ‘ಎಕ್ಕ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಇಂದು ಎಕ್ಕ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದು, ಚಿತ್ರ ತಾರಾಬಳಗದಲ್ಲಿ ಯುವರಾಜ್ ಕುಮಾರ್, ಸಂಪದ, ಸಂಜನಾ ಆನಂದ್ ಅಭಿನಯಿಸಿದ್ದಾರೆ. ಅಂದಹಾಗೆ ಜೂನ್ 6 ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ.

ಉಗ್ರರ ದಾಳಿ ಹಿನ್ನೆಲೆ ಸಿನಿಮಾದ ಟೀಸರ್ ರಿಲೀಸ್ ಮುಂದೂಡಿದ್ದ ಚಿತ್ರತಂಡ :

ಆತ್ಮೀಯ ಸ್ನೇಹಿತರೇ ….ನಮ್ಮೆಲ್ಲರ ಮನಸ್ಸು ಭಾರವಾಗಿದೆ ಪೆಹಲ್ಗಾಮಿನಲ್ಲಿ ನಿನ್ನೆ ಉಗ್ರಗಾಮಿಗಳು ನಡೆಸಿದ ಹೀನ ಕೃತ್ಯದಿಂದಾಗಿ ಅಮಾಯಕ ಜನರು ಬಲಿಯಾಗಿದ್ದಾರೆ. ಮೃತರೆಲ್ಲರು ಭವಿಷ್ಯದ ಕನಸು ಹೊತ್ತು, ತಮ್ಮ ಕುಟುಂಬವನ್ನು ಪ್ರೀತಿಸುತ್ತ ಸರಳ ಸಾಧಾರಣ ಜೀವನ ನಡೆಸುತ್ತಿದ್ದವರು. ಯಾವುದೇ ಘರ್ಷಣೆಗಳಲ್ಲಿ ಅವರ ಪಾತ್ರವಿಲ್ಲದಿದ್ದರೂ ಬಲಿಯಾಗಿದ್ದಾರೆ. ಶಾಂತಿರಹಿತ ಬದುಕು ಎಷ್ಟು ದುರ್ಭರ ಅನ್ನಿಸುವ ಕಟುನೋವಿನ ಸಂಗತಿ ಇದು.

ಇಂಥ ನೋವಿನ ಸಂದರ್ಭದಲ್ಲಿ ಬುದ್ಧ ಎಲ್ಲ ವಿಷಯಗಳು ನಗಣ್ಯವಾಗುತ್ತೆ. ನಮ್ಮೆಲ್ಲ ಸಂಭ್ರಮಾಚರಣೆಗೆ ಬಿಡುವು ನೀಡಿ, ದೇಶದ ಶೋಕಾಚರಣೆಯಲ್ಲಿ ಭಾಗಿಯಾಗುವುದು ಈ ದೇಶದ ನಾಗರೀಕರಾಗಿ, ಮನುಷ್ಯರಾಗಿ ನಮ್ಮೆಲ್ಲರ ಕರ್ತವ್ಯ.

ಮೃತಪಟ್ಟವರ ಗೌರವ ಸೂಚಕವಾಗಿ ಹಾಗು ಅವರ ಕುಂಟುಬದವರ ನೋವಿನಲ್ಲಿ ಸಹಭಾಗಿಗಳಾಗಿ, ನಾವು ನಮ್ಮ ‘ಎಣ್ಣೆ’ ಸಿನಿಮಾದ ಟೀಸರ್ ಬಿಡುಗಡೆಯನ್ನು ನಾಳೆಗೆ ಮುಂದೂಡುತ್ತಿದ್ದೇವೆ.ಮೃತರ ಆತ್ಮಕ್ಕೆ ಸದ್ಗತಿಯಾಗಲಿ, ಅವರ ಕುಟುಂಬ ಸದಸ್ಯರಿಗೆ ತಮ್ಮ ಪ್ರೀತಿಪಾತ್ರರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಮೌನವೂ ನಮ್ಮ ಪ್ರತಿಭಟನೆ! ಎಂದು ಚಿತ್ರತಂಡ ಪೋಸ್ಟ್ ಮಾಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read