ಬೆಂಗಳೂರು: ಚಿನ್ನ ಕದ್ದಿರುವುದನ್ನು ಪ್ರಶ್ನಿಸಿದಕ್ಕೆ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.
ಚಾಕುವಿನಿಂದ ಇರಿದು ರಾಹುಲ್ ನನ್ನು ಪ್ರೀತಂ ಕೊಲೆ ಮಾಡಿದ್ದಾನೆ. ಅಕ್ಟೋಬರ್ 25 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
10 ದಿನಗಳ ಹಿಂದೆ ಪ್ರೀತಂ ತಾಯಿಯ ಚಿನ್ನ ಕಳ್ಳತನವಾಗಿತ್ತು. ಆ ಚಿನ್ನವನ್ನು ಕದ್ದಿದ್ದು ಯಾರು ಎನ್ನುವುದು ಗೊಂದಲವಾಗಿತ್ತು. ತಾಯಿಯ ಚಿನ್ನವನ್ನು ರಾಹುಲ್ ಕದ್ದಿದ್ದಾನೆ ಎಂದು ಪ್ರೀತಂ ಹೇಳಿದ್ದಾನೆ. ಆದರೆ ಪ್ರೀತಂ ಚಿನ್ನ ಕದ್ದಿದ್ದಾನೆ ಎಂದು ರಾಹುಲ್ ಆರೋಪಿಸುತ್ತಿದ್ದ. ಕಳೆದ ಶನಿವಾರ ಪ್ರೀತಂ ಬ್ಯಾಗ್ ನಲ್ಲಿ ರಾಹುಲ್ ಚಿನ್ನವನ್ನು ನೋಡಿದ್ದಾನೆ. ನಿನ್ನ ಮಗ ಚಿನ್ನ ಕದ್ದಿದ್ದು ಎಂದು ಪ್ರೀತಂ ತಾಯಿಗೆ ರಾಹುಲ್ ಹೇಳಿದ್ದಾನೆ. ಇದರಿಂದ ಕೋಪಗೊಂಡು ಚಾಕುವಿನಿಂದ ಇರಿದು ರಾಹುಲ್ ಕೊಲೆ ಮಾಡಲಾಗಿದೆ. ಆರೋಪಿ ಪ್ರೀತಂನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
