ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಏರ್ ಇಂಡಿಯಾ ಕಂಪನಿಯ ನಾಲ್ವರು ಸೇರಿ ಐವರು ಆರೋಪಿಗಳನ್ನು ಮಂಗಳೂರು ಬಜ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿತಿನ್, ಸದಾನಂದ, ರಾಜೇಶ್, ಪ್ರವೀಣ್ ಫೆರ್ನಾಂಡಿಸ್ ಬಂಧಿತ ಆರೋಪಿಗಳು. 9 ವರ್ಷಗಳಿಂದ ಏರ್ ಇಂಡಿಯಾ ಕಂಪನಿಯಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದರು. ಏರ್ ಇಂಡಿಯಾ ಕಂಪನಿಯ ನಾಲ್ವರು ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಏರ್ ಇಂಡಿಯ ಕಂಪನಿಯಲ್ಲಿ ನಾಲ್ವರು ಲೋಡರ್, ಅನ್ ಲೋಡರ್ ಕೆಲಸ ಮಾಡುತ್ತಿದ್ದರು. ಆಗಸ್ಟ್ 30ರಂದು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕ ತೆರಳಿದ್ದರು. ಅವರು ಲಗೇಜ್ ಪಡೆದು ನೋಡಿದಾಗ 56 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಈ ಹಿಂದೆ ಕದ್ದಿದ್ದ ಎರಡು ಲಕ್ಷ ನಗದು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳಿಂದ ಚಿನ್ನ ಖರೀದಿಸಿದ್ದ ರವಿರಾಜ್ ಎಂಬವನನ್ನು ಬಂಧಿಸಲಾಗಿದೆ.