ಬೆಂಗಳೂರು: ಆಹಾರ ಇಲಾಖೆಯಿಂದ ಹಾಲಿನ ಗುಣಮಟ್ಟ ಪರೀಕ್ಷೆಗೆ ಮುಂದಾಗಿದ್ದು, ರಾಜ್ಯದಾದ್ಯಂತ ಹಾಲಿನ ಸ್ಯಾಂಪಲ್ಸ್ ಪಡೆಯಲಾಗಿದೆ.
ಆಹಾರ ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಕಂಪನಿಯ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇಡೀ ರಾಜ್ಯಾದ್ಯಂತ 870 ಹಾಲಿನ ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಲಾಗಿದೆ.
ಕೆಎಂಎಫ್ ಮತ್ತು ಆಹಾರ ಸುರಕ್ಷತಾ ಲ್ಯಾಬ್ ಗಳಿಗೆ ಸಂಗ್ರಹಿಸಿದ ಹಾಲಿನ ಸ್ಯಾಂಪಲ್ಸ್ ರವಾನೆ ಮಾಡಲಾಗಿದೆ. ಇವುಗಳ ವರದಿ ಬಂದ ನಂತರ ಆಹಾರ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.