BREAKING : ಲಡಾಖ್ ಪ್ರವಾಹದಲ್ಲಿ ಕೊಚ್ಚಿಹೋಗಿ ಐವರು ಭಾರತೀಯ ಯೋಧರು ಹುತಾತ್ಮ..!

ಲಡಾಖ್ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಟಿ -72 ಟ್ಯಾಂಕ್ ನಲ್ಲಿ ನದಿಯನ್ನು ದಾಟುವಾಗ ಸೇನೆಯ ಐವರು ಸೈನಿಕರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಇಲ್ಲಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ ಮೋರ್ಹ್ ಬಳಿ ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಐವರು ಸೈನಿಕರನ್ನು ಹೊತ್ತ ಟಿ -72 ಟ್ಯಾಂಕ್ ನದಿಯನ್ನು ದಾಟುವಾಗ ಪ್ರವಾಹದಿಂದಾಗಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಟ್ಯಾಂಕ್ ನಕ್ಕು ಒಬ್ಬ ಜೆಸಿಒ ಮತ್ತು 4 ಜವಾನರು ಸೇರಿದಂತೆ ಐದು ಸೈನಿಕರು ಇದ್ದರು. ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು, ಇತರರಿಗಾಗಿ ಶೋಧ ಮುಂದುವರೆದಿದೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read