BREAKING : ಬೆಳಗಾವಿಯಲ್ಲಿ ದಾರುಣ ಘಟನೆ ; ಮೀನು ಹಿಡಿಯಲು ಹೋಗಿ ತಂದೆ, ಇಬ್ಬರು ಮಕ್ಕಳು ಸಾವು

ಬೆಳಗಾವಿ : ಬೆಳಗಾವಿಯಲ್ಲಿ ದಾರುಣ ಘಟನೆ ನಡೆದಿದ್ದು, ಮೀನು ಹಿಡಿಯಲು ಹೋಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಲಕ್ಷ್ಮಣ ರಾಮ ಅಂಬಲಿ (49) ರಮೇಶ (15) ಯಲ್ಲಪ್ಪ (13) ನಾಪತ್ತೆಯಾದವರು. ಬಲೆ ಹಾಕಿ ಮೀನು ಹಿಡಿಯಲು ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ನೀರಿನಲ್ಲಿ ಆಯತಪ್ಪಿ ಬಿದ್ದು ಮುಳುಗಲು ಆರಂಭಿಸಿದ ಓರ್ವ ಪುತ್ರನನ್ನು ರಕ್ಷಿಸಲು ಹೋದ ತಂದೆ ಹಾಗೂ ಇನ್ನೋರ್ವ ಮಗ ನೀರಿನಲ್ಲಿ ಮುಳುಗಿದ್ದಾರೆ  . ಸದ್ಯ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿ ಮೂವರ ಮೃತದೇಹವನ್ನು ಪತ್ತೆ ಹಚ್ಚಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read