ಬೆಂಗಳೂರು: ಎಪಿಎಂಸಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ.
ಮಂಡಿ ವ್ಯಾಪಾರಿ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪಕ್ಕದ ಮಂಡ್ಯ ನಾಗರಾಜ, ಶ್ರೀಕಾಂತ, ಮಂಜ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ವ್ಯವಹಾರ ಸಂಬಂಧ ಚೇತನ್ ಬಳಿ ಮೂವರು ಆರೋಪಿಗಳು ಹಣ ಪಡೆದುಕೊಂಡಿದ್ದರು. ಹಲವು ತಿಂಗಳಾದರೂ ಹಣ ವಾಪಸ್ ನೀಡಿರಲಿಲ್ಲ. ನಿನ್ನೆ ಹಣ ನೀಡುವಂತೆ ಕೇಳಿದ್ದಕ್ಕೆ ನಿಂದಿಸಿ ಚೇತನ್ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಯಿಂದ ಚೇತನ್ ಮೂಗಿನ ಮೂಳೆ ಮುರಿದಿದೆ. ಎಪಿಎಂಸಿಯಲ್ಲಿ ಆರೋಪಿಗಳು ಹವಾ ಮೆಂಟೇನ್ ಮಾಡುತ್ತಿದ್ದರು. ಆರೋಪಿಗಳು ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಭಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
