BREAKING : ಖ್ಯಾತ ಹಿರಿಯ ಹಿಂದೂಸ್ತಾನಿ ಗಾಯಕಿ ‘ಪ್ರಭಾ ಅತ್ರೆ’ ಇನ್ನಿಲ್ಲ |Prabha Atre Passed Away

ಖ್ಯಾತ ಶಾಸ್ತ್ರೀಯ ಗಾಯಕಿ ಪ್ರಭಾ ಅತ್ರೆ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಹೃದಯಾಘಾತ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಹಿರಿಯ ಗಾಯಕಿ ಪ್ರಭಾ ಅತ್ರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ ಘರಾನಾಕ್ಕೆ ಸೇರಿದವರು. ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ ಪದ್ಮ ವಿಭೂಷಣ, ಪದ್ಮಶ್ರೀ ಮತ್ತು ಪದ್ಮಭೂಷಣ ಎಂಬ ಮೂರು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನೀಡಿದೆ.

1932ರ ಸೆಪ್ಟೆಂಬರ್ 13ರಂದು ಜನಿಸಿದ್ದಅತ್ರೆ ಕಾನೂನು ಪದವೀಧರರಾಗಿದ್ದರು ಹಾಗೂ ಅವರು ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದರು. ಗಾಯಕಿ ಮಾತ್ರವಲ್ಲದೇ, ಶಿಕ್ಷಣತಜ್ಞೆಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದರು.

ಇವರಿಗೆ ಜನವರಿ 2022 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣವನ್ನು ನೀಡಲಾಯಿತು. 1990ರಲ್ಲಿ ಪದ್ಮಶ್ರೀ ಹಾಗೂ 2002ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ೧೯೯೧ ರಲ್ಲಿ, ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಇದಲ್ಲದೆ, ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ, ಟ್ಯಾಗೋರ್ ಅಕಾಡೆಮಿ ರತ್ನ ಪ್ರಶಸ್ತಿ, ದೀನನಾಥ್ ಮಂಗೇಶ್ಕರ್ ಪ್ರಶಸ್ತಿ, ಹಫೀಜ್ ಅಲಿ ಖಾನ್ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read