ಕಾರವಾರ: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಮನೆಯೊಂದರಲ್ಲಿ 14 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿವೆ.
ದಾಂಡೇಲಿಯ ಗಾಂಧಿನಗರ ಬಡಾವಣೆಯ ಅರ್ಷದ್ ಖಾನ್ ಎಂಬುವರ ಮನೆಯಲ್ಲಿ 500 ಮುಖಬೆಲೆಯ 14 ಕೋಟಿ ರೂಪಾಯಿ ಪತ್ತೆಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ಅರ್ಷದ್ ಖಾನ್ ಮನೆಗೆ ಬಂದಿದ್ದು, ಇಂದು ಪೊಲೀಸರು ದಾಳಿ ಮಾಡಿ ಪರಿಶೀಲಿಸಿದಾಗ ಕೋಟಿ ಕೋಟಿ ನಕಲಿ ನೋಟು ಪತ್ತೆಯಾಗಿದೆ.
ನೋಟುಗಳ ಮೇಲೆ ಆರ್‌ಬಿಐ ಎಂಬ ಬರಹ ಇಲ್ಲ, ಗವರ್ನರ್ ಸಹಿಯು ಕೂಡ ಇಲ್ಲ. ಮೂವಿ ಶೂಟಿಂಗ್ ಪರ್ಪಸ್ ಓನ್ಲಿ ಎಂದು ನೋಟುಗಳ ಮೇಲೆ ಬರೆಯಲಾಗಿದೆ. ನಕಲಿ ನೋಟಿನ ಸಂಖ್ಯೆಯಲ್ಲಿ ಸೊನ್ನೆಯನ್ನಷ್ಟೇ ನಮೂದು ಮಾಡಲಾಗಿದೆ. ಯಾವ ಉದ್ದೇಶಕ್ಕಾಗಿ ಇಷ್ಟೊಂದು ನೋಟು ಮುದ್ರಣ ಮಾಡಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.