ಮಥುರಾ : ಉತ್ತರ ಪ್ರದೇಶದಲ್ಲಿ ತಡರಾತ್ರಿ ಇಎಂಯು ರೈಲು ಹಳಿ ತಪ್ಪಿದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಮಥುರಾ ಜಂಕ್ಷನ್ ಬಳಿ ನಡೆದಿದೆ.
ಉತ್ತರ ಪ್ರದೇಶದ ಮಥುರಾ ಜಂಕ್ಷನ್ನಲ್ಲಿ ತಡರಾತ್ರಿ ರೈಲು ಅಪಘಾತ ಸಂಭವಿಸಿದೆ. ಶಕುರ್ ಬಸ್ತಿಯಿಂದ ಬರುತ್ತಿದ್ದ ಇಎಂಯು ರೈಲು ಮಥುರಾ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಹತ್ತಿತು. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ರೈಲು ಶಕೂರ್ ಬಸ್ತಿಯಿಂದ ಬರುತ್ತಿತ್ತು… ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮಥುರಾ ರೈಲ್ವೆ ನಿಲ್ದಾಣದ ನಿರ್ದೇಶಕ ಎಸ್.ಕೆ.ಶ್ರೀವಾಸ್ತವ ಹೇಳಿದ್ದಾರೆ.
https://twitter.com/ANI/status/1706797602459808111?ref_src=twsrc%5Etfw%7Ctwcamp%5Etweetembed%7Ctwterm%5E1706797602459808111%7Ctwgr%5Ee10cc38820bd47f0010cb712a399dddb64a95cad%7Ctwcon%5Es1_&ref_url=https%3A%2F%2Fwww.aajtak.in%2Futtar-pradesh%2Fstory%2Femu-train-derails-platform-mathura-railway-station-ntc-1787339-2023-09-27