BREAKING : ಅಮೆರಿಕದ ಅಧ್ಯಕ್ಷರಾಗಿ ‘ಡೊನಾಲ್ಡ್ ಟ್ರಂಪ್’ ಆಯ್ಕೆ, 2 ನೇ ಬಾರಿಗೆ ಒಲಿದ ಅದೃಷ್ಟ |Donald Trump

ಕಮಲ ಹ್ಯಾರೀಸ್ ವಿರುದ್ಧ ಗೆದ್ದು ಬೀಗಿದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾಗಿ 2 ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಬಹುತೇಕ ಫಲಿತಾಂಶ ನಿರ್ಧಾರವಾಗಿರುವುದರಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದ್ದಾರೆ.

ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ. ಇದು ಪ್ರಪಂಚದ ಅತ್ಯಂತ ಪ್ರಮುಖ ಕೆಲಸ.. ನಾನು ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಟ್ರಂಪ್ ನುಡಿದರು.
ಡೊನಾಲ್ಡ್ ಟ್ರಂಪ್ ಬುಧವಾರ ವೇದಿಕೆಗೆ ತೆರಳಿ ವಿಜಯವನ್ನು ಘೋಷಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್ಗೆ “ಸುವರ್ಣ ಯುಗ” ತರುವುದಾಗಿ ಪ್ರತಿಜ್ಞೆ ಮಾಡಿದರು. ಬೆಂಬಲ ನೀಡಿದ್ದಕ್ಕೆ ಅವರು ಮತದಾರರಿಗೆ ಧನ್ಯವಾದ ತಿಳಿಸಿದರು.

ತಮ್ಮ ಮೇಲೆ ನಡೆದ ಕೊಲೆ ಯತ್ನವನ್ನು ನೆನಪಿಸಿಕೊಂಡ ಟ್ರಂಪ್ ಹೇಳುತ್ತಾರೆ, “… ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದ್ದಾನೆ ಎಂದು ಅನೇಕ ಜನರು ನನಗೆ ಹೇಳಿದ್ದಾರೆ. ಆ ಕಾರಣವೆಂದರೆ ನಮ್ಮ ದೇಶವನ್ನು ಉಳಿಸುವುದು ಮತ್ತು ಅಮೆರಿಕವನ್ನು ಶ್ರೇಷ್ಠತೆಗೆ ಪುನಃಸ್ಥಾಪಿಸುವುದು ಮತ್ತು ಈಗ ನಾವು ಆ ಧ್ಯೇಯವನ್ನು ಒಟ್ಟಿಗೆ ಪೂರೈಸಲಿದ್ದೇವೆ … ಎಂದು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read