ಬೆಂಗಳೂರು: ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋ ಗೇಟ್ ಬೀಗ ತೆಗೆಯಲಾಗಿದೆ. ಮಧ್ಯರಾತ್ರಿ ಗೇಟ್ ಗೆ ಹಾಕಿದ್ದ ಬೀಗ ತೆಗೆಯಲಾಗಿದ್ದು, ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.
ಎರಡು ದಿನಗಳಿಂದ ಬಂದ್ ಆಗಿದ್ದ ‘ಬಿಗ್ ಬಾಸ್’ ಮನೆ ಬೀಗವನ್ನು ಮಧ್ಯರಾತ್ರಿ 2.42ಕ್ಕೆ ತೆಗೆಯುತ್ತಿದ್ದಂತೆ ಸ್ಪರ್ಧಿಗಳನ್ನು ಕರೆತರಲಾಗಿದೆ.
ಜಾಲಿವುಡ್ ಸ್ಟುಡಿಯೋ ಗೇಟ್ ಸಿ ಮಾತ್ರ ಓಪನ್ ಮಾಡಲಾಗಿದೆ. ‘ಬಿಗ್ ಬಾಸ್’ ನನಗೆ ಸಂಪರ್ಕ ಕಲ್ಪಿಸುವ ಗೇಟ್ ಸಿ ಅನ್ನು ಜಿಲ್ಲಾಧಿಕಾರಿ ಯಶವಂತ ಗುರುಕರ್ ಸಮ್ಮುಖದಲ್ಲಿ ಓಪನ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ ಗೌಡ ಸಾಥ್ ನೀಡಿದ್ದಾರೆ. ಸ್ಟುಡಿಯೋದಲ್ಲಿ ಯಾವ ಚಟುವಟಿಕೆಗಳಿಗೂ ಅವಕಾಶವಿಲ್ಲ. ಕೇವಲ ಬಿಗ್ ಬಾಸ್ ಮನೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸಿ ಗೇಟ್ ಓಪನ್ ಮಾಡಲಾಗಿದ್ದು, ಬಿಗ್ ಬಾಸ್ ಕೆಲಸಗಳಿಗೆ ಗೇಟ್ ಓಪನ್ ಮಾಡಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಡಿಸಿ ಯಶವಂತ ಗುರುಕರ್ ತಿಳಿಸಿದ್ದಾರೆ.