ಬೆಂಗಳೂರು: ಮರು ಪರೀಕ್ಷೆಯಲ್ಲಿ(ಮೇಕ್ ಅಪ್) ಅರ್ಹತೆ ಪಡೆದ ಡಿಪ್ಲೊಮಾ ಅಭ್ಯರ್ಥಿಗಳಿಗೆ Rank ಕೊಟ್ಟು, ಡಿಸಿಇಟಿ ಅಂತಿಮ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಅವಕಾಶ ನೀಡಿದೆ.
ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅಂಕಗಳ ವಿವರಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದು, ಆಗಸ್ಟ್ 13ರಂದು Rank ನೀಡಲಾಗುವುದು. ಇವರು ಸೇರಿದಂತೆ ಇದುವರೆಗೂ ದಾಖಲೆ ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಆಗಸ್ಟ್ 14ರ ಮಧ್ಯಾಹ್ನ 2.30ರೊಳಗೆ ಕೆಇಎ ಕಚೇರಿಗೆ ಬಂದು ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#DCET-25: ಮರು ಪರೀಕ್ಷೆಯಲ್ಲಿ (ಮೇಕ್ ಅಪ್) ಅರ್ಹತೆ ಪಡೆದ ಡಿಪ್ಲೊಮಾ ಅಭ್ಯರ್ಥಿಗಳಿಗೆ Rank ಕೊಟ್ಟು, ಡಿಸಿಇಟಿ ಅಂತಿಮ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು #KEA ಅವಕಾಶ ನೀಡಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 12, 2025
ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅಂಕಗಳ ವಿವರಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದು, ಆಗಸ್ಟ್ 13ರಂದು Rank… pic.twitter.com/ySzOGCpFTa