ಬೆಂಗಳೂರು: ಬೆಂಗಳೂರಿನ ಡಿಜಿ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ನೀಡಲಾಗಿದೆ.
ಎ14 ಸೈಯದ್ ಇಕ್ರಮುದ್ದೀನ್ ಅಲಿಯಾಸ್ ನವೀದ್, ಎ16 ಸೈಯದ್ ಆಸೀಫ್, ಎ18 ಮೊಹಮದ್ ಆರೀಫ್ ಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಜೊತೆಗೆ ತಲಾ 46 ಸಾವಿರ ರೂ. ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಯುಎಪಿಎ ಕಾಯ್ದೆಯಡಿ ಅಪರಾಧಿಗಳು ಬಂಧಿತರಾಗಿದ್ದರು. ಗಲಭೆ ನಡೆಸಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪವಿತ್ತು. ಎನ್ಐಎ ಪರವಾಗಿ ಎಸ್.ಪಿ.ಪಿ. ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.