ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ಶವ ಹೂತಿಟ್ಟ ಶವಗಳನ್ನು ಗುರುತಿಸಲಾದ ಪಾಯಿಂಟ್ 1ರಲ್ಲಿ ದೊರೆತಿದ್ದ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ ಬಯಲಾಗಿದೆ.
ಕಳೆದ ಮಾರ್ಚ್ ನಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪಾನ್ ಕಾರ್ಡ್ ಅದಾಗಿದೆ ಎಂದು ಗೊತ್ತಾಗಿದೆ. ಪಾಯಿಂಟ್ 1ರಲ್ಲಿ ಶೋಧ ಕಾರ್ಯದ ವೇಳೆ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯವೂ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನು ಜೀವಂತವಾಗಿದ್ದಾರೆ. ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ವಾರಸುದಾರ ನೆಲಮಂಗಲ ಮೂಲದ ವ್ಯಕ್ತಿಯಾಗಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅವರು ಮೃತಪಟ್ಟಿದ್ದಾರೆ. ಡೆಬಿಟ್ ಕಾರ್ಡ್ ಮೃತನ ತಾಯಿಗೆ ಸೇರಿದ್ದು ಎನ್ನುವುದು ಗೊತ್ತಾಗಿದೆ. ಮಹಿಳೆ ಇನ್ನು ಜೀವಂತವಾಗಿದ್ದಾರೆ. ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಸ್ಥಳಗಳಲ್ಲಿ ಶೋಧ ಮುಂದುವರೆದಿದೆ.
ಇಂದು 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ, ಬುರಡೆಯ ಎರಡು ತುಂಡುಗಳು ಪತ್ತೆಯಾಗಿವೆ. ಸ್ಥಳದಲ್ಲಿ ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ಐಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ.