ಕ್ಯಾಲಿಫೋರ್ನಿಯಾ: 18 ದಿನಗಳ ಬಾಹ್ಯಾಕಾಶ ಯಾನ ಮುಗಿಸಿ ಭೂಮಿಗೆ ಮರಳಲು ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಸಜ್ಜಾಗಿದ್ದಾರೆ.
ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯಾದ ಗಗನಯಾನಿ ಟಿಬೋರ್ ಕಾಪು ಅವರು ಭೂಮಿಗೆ ಬರಲು ಸಜ್ಜಾಗಿದ್ದಾರೆ.
18 ದಿನಗಳ ಬಾಹ್ಯಾಕಾಶಯಾನವನ್ನು ಮುಗಿಸಿ ನಾಲ್ವರು ಭೂಮಿಗೆ ಮರಳಲಿದ್ದಾರೆ. ಮಧ್ಯಾಹ್ನ 2.25ಕ್ಕೆ ಡ್ರ್ಯಾಗನ್ ನೌಕೆಯನ್ನು ಪ್ರವೇಶಿಸಲಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್ಎಸ್) ಭೂಮಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಸಂಜೆ 4:30ಕ್ಕೆ ಭೂಮಿಯತ್ತ ನಾಲ್ವರು ಪ್ರಯಾಣ ಆರಂಭಿಸಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಭೂಮಿಗೆ ತಲುಪಲಿದ್ದಾರೆ. ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಡ್ರ್ಯಾಗನ್ ನೌಕೆ ಇಳಿಯಲಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಮರಳಲು ಸಿದ್ಧರಾಗುತ್ತಿದ್ದಂತೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅವರ ವಿದಾಯ ಸಂದೇಶವು ಭಾರತದ ಬಾಹ್ಯಾಕಾಶ ಭವಿಷ್ಯದ ಬಗ್ಗೆ ಹೆಮ್ಮೆ, ಕೃತಜ್ಞತೆ ಮತ್ತು ಭರವಸೆಯೊಂದಿಗೆ ಪ್ರತಿಧ್ವನಿಸಿತು.
ಇಂದು, ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯ, ನಿರ್ಭೀತ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಕಾಣುತ್ತದೆ. ಭಾರತವು ಇನ್ನೂ ಸಾರೆ ಜಹಾಂ ಸೇ ಅಚ್ಚಾ ಎಂದು ಅವರು ಘೋಷಿಸಿದರು, ಪೀಳಿಗೆಗೆ ಸ್ಫೂರ್ತಿ ನೀಡಿದ ಐಕಾನಿಕ್ ದೇಶಭಕ್ತಿ ಗೀತೆಯನ್ನು ಉಲ್ಲೇಖಿಸಿದ್ದಾರೆ.