ತುಮಕೂರು: ತುಮಕೂರು ಜಿಲ್ಲೆಯ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಲೋಕಾಯುಕ್ತದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತುಮಕೂರಿನ ನಿವೃತ್ತ ಯೋಧರು ಅವರ ಅವಲಂಬಿತರು, ಹುತಾತ್ಮ ಯೋಧರು, ಹುತಾತ್ಮ ಯೋಧರ ಅವಲಂಬಿತರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವಲಂಬಿತರಿಗೆ ಸೌಲಭ್ಯ ನೀಡುವಲ್ಲಿ ಲೋಪ ಎಸಗಿದ ಆರೋಪ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಭ್ರಷ್ಟಾಚಾರ, ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಮೊಟೊ ಪ್ರಕರಣ ದಾಖಲಿಸಿಕೊಂಡಿದೆ.
ತುಮಕೂರು ತಹಶೀಲ್ದಾರ್ ರಾಜೇಶ್ವರಿ ಪಿ.ಎಸ್., ಗುಬ್ಬಿ ತಹಶೀಲ್ದಾರ್ ಬಿ. ಆರತಿ, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಪುರಂದರ, ಕುಣಿಗಲ್ ತಹಶೀಲ್ದಾರ್ ರಶ್ಮಿ ಉದಯ್ ರಾಜ್, ಮಧುಗಿರಿ ತಹಶೀಲ್ದಾರ್ ಶ್ರೀನಿವಾಸ ಹೆಚ್., ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಕೆ., ಪಾವಗಡ ತಹಶೀಲ್ದಾರ್ ವರದರಾಜು, ಶಿರಾ ತಹಶೀಲ್ದಾರ್ ಸಚ್ಚಿದಾನಂದ ಕುಸನೂರು, ತಿಪಟೂರು ತಹಶೀಲ್ದಾರ್ ಮೋಹನ ಕುಮಾರ್, ತುರುವೇಕೆರೆ ತಹಶೀಲ್ದಾರ್ ಎಂ.ಎ. ಕುಮಿ ಅಹಮದ್, ಉಪವಿಭಾಗಾಧಿಕಾರಿ ನಹಿದಾ ಜಮ್ ಜಮ್, ಸಪ್ತಶ್ರೀ, ಗೋಟೂರು ಶಿವಪ್ಪ ವಿರುದ್ಧ ಕೇಸು ದಾಖಲಿಸಲಾಗಿದೆ. ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಹಾಗೂ ನಿವೇಶನವನ್ನು ನಿಗದಿತ ಸಮಯದಲ್ಲಿ ನೀಡದ ಆರೋಪ ಕೇಳಿ ಬಂದಿದೆ.