BREAKING: ಸೈಕಲ್, ವಿಮೆ, ಔಷಧಿ ಮೇಲೂ ಕಾಂಗ್ರೆಸ್ ಟ್ಯಾಕ್ಸ್ ಹಾಕಿತ್ತು, ಅಗತ್ಯ ವಸ್ತುಗಳ ಬೆಲೆ ಗಗನಕೇರಿತ್ತು: ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ತೆರಿಗೆ ಹಾಕಲಾಗಿತ್ತು. ಪ್ರತಿ ವಸ್ತುವಿನ ಮೇಲೆಯೂ ತೆರಿಗೆ ಹಾಕಿದ್ದರು. ಆಹಾರದ ಮೇಲೆಯೂ ಕಾಂಗ್ರೆಸ್ ತೆರಿಗೆ ಹಾಕಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈಗ ಜಿ.ಎಸ್.ಟಿ. ಸರಳೀಕರಣ ಮಾಡಲಾಗಿದೆ. ಜಿ.ಎಸ್‌.ಟಿ. ಸ್ಲ್ಯಾಬ್ ದರ ಇಳಿಕೆ ಒಂದು ಮೈಲಿಗೆಲ್ಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಪ್ರತಿ ವಸ್ತುಗಳ ಮೇಲೆ ತೆರಿಗೆ ಹಾಕಿದ್ದರು. ಆಹಾರದ ಮೇಲೆ ಹೆಚ್ಚು ತೆರಿಗೆ ಹಾಕಿದ್ದರು. ಮಧ್ಯಮ ವರ್ಗದವರ ಜೀವನ ಕಷ್ಟಕರವಾಗಿತ್ತು. ನಾವು ತೆರಿಗೆಯನ್ನು ಕಡಿತಗೊಳಿಸಿದ್ದೇವೆ. ಹಲವು ತೆರಿಗೆಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ 2014ಕ್ಕೆ ಮೊದಲು 100 ರೂಪಾಯಿಗೆ 14 ರೂಪಾಯಿ ತೆರಿಗೆ ಇತ್ತು. ಸೈಕಲ್ ಮೇಲೆಯೂ ಶೇಕಡ 17ರಷ್ಟು ತೆರಿಗೆಯನ್ನು ಕಾಂಗ್ರೆಸ್ ಹಾಕಿತ್ತು. ಈಗ ಜಿ.ಎಸ್.ಟಿ. ಸರಳೀಕರಣದಿಂದ ಕೋಟ್ಯಂತರ ಜನರಿಗೆ ಅನುಕೂಲಕರವಾಗಿದೆ. ಈಗ ಜಿಎಸ್​ಟಿ ಕೇವಲ ಎರಡು ಸ್ಲ್ಯಾಬ್ ಗಳನ್ನು ಮಾತ್ರ ಹೊಂದಿದೆ. ಕಾಂಗ್ರೆಸ್ ನವರು ತೆರಿಗೆ ಹೆಸರಲ್ಲಿ ಲೂಟಿ ಮಾಡುತ್ತಿದ್ದರು. ಯುಪಿಎ ಅವಧಿಯಲ್ಲಿ ಬೃಹತ್ ಪ್ರಮಾಣದಲ್ಲಿ ತೆರಿಗೆ ಹಾಕುತ್ತಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕೇರಿತ್ತು ಎಂದು ಹೇಳಿದ್ದಾರೆ.

ಈಗ ಜಿಎಸ್ಟಿ ಇನ್ನಷ್ಟು ಸರಳವಾಗಿದೆ. ಸೆಪ್ಟೆಂಬರ್ 22 ರಂದು ಅಂದರೆ ನವರಾತ್ರಿಯ ಮೊದಲ ದಿನ ಮುಂದಿನ ಪೀಳಿಗೆಯ ಸುಧಾರಣೆಯನ್ನು ಜಾರಿಗೆ ತರಲಾಗುವುದು. ಏಕೆಂದರೆ ಈ ಎಲ್ಲಾ ವಿಷಯಗಳು ಖಂಡಿತವಾಗಿಯೂ ‘ಮಾತೃಶಕ್ತಿ’ಗೆ ಸಂಬಂಧಿಸಿವೆ. ಎಂದು ಹೇಳಿದ್ದಾರೆ.

ಜಿಎಸ್‌ಟಿ ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿತ್ತು. ವಾಸ್ತವವಾಗಿ ಈ ಸುಧಾರಣೆಗಳು ದೇಶಕ್ಕೆ ಬೆಂಬಲ ಮತ್ತು ಬೆಳವಣಿಗೆಯ ಎರಡು ಪಟ್ಟು. ಒಂದೆಡೆ, ದೇಶದ ಸಾಮಾನ್ಯ ಜನರು ಹಣವನ್ನು ಉಳಿಸುತ್ತಾರೆ ಮತ್ತು ಮತ್ತೊಂದೆಡೆ ದೇಶದ ಆರ್ಥಿಕತೆಯನ್ನು ಬಲಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read