ಮಂಗಳೂರು: ದೂರುದಾರ ಮಹಿಳೆಗೆ ಫೋನ್ ಮಾಡಿ ಕಿರುಕುಳ ನೀಡಿದ ಮೂಡಬಿದ್ರೆ ಪೊಲೀಸ್ ಕಾನ್ಸ್ಟೇಬಲ್ ಶಾಂತಪ್ಪ ಕುಷ್ಟಗಿ ಅವರನ್ನು ಬಂಧಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಶಾಂತಪ್ಪ ಕುಷ್ಟಗಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಪತಿಯ ವಿರುದ್ಧ ದೂರು ನೀಡಲು ಮಹಿಳೆ ಠಾಣೆಗೆ ಬಂದಿದ್ದರು. ಲೆಡ್ಜರ್ ನಲ್ಲಿ ಹೆಸರು, ಫೋನ್ ನಂಬರ್ ಬರೆದಿದ್ದರು.
ಠಾಣೆಯಲ್ಲಿ ಹೆಸರು, ಫೋನ್ ನಂಬರ್ ಎಂಟ್ರಿ ಮಾಡಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಮಾತನಾಡುವಂತೆ ಪದೇಪದೇ ಫೋನ್ ಮಾಡುತ್ತಿದ್ದ. ಪದೇಪದೇ ಕಿರುಕುಳ ನೀಡಿದ್ದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹಿಳೆ ದೂರು ನೀಡಿದ್ದರು. ಮಹಿಳೆ ದೂರಿನ ಮೇರೆಗೆ ಕಾನ್ಸ್ಟೇಬಲ್ ಶಾಂತಪ್ಪ ಕುಷ್ಟಗಿಯನ್ನು ಬಂಧಿಸಲಾಗಿದೆ.