BREAKING : ‘ಮುಡಾ’ದಲ್ಲಿ CM ಸಿದ್ದರಾಮಯ್ಯ ಮತ್ತೊಂದು ಹಗರಣ ಮಾಡಿದ್ದಾರೆ : H.D ಕುಮಾರಸ್ವಾಮಿ ಸ್ಪೋಟಕ ಹೇಳಿಕೆ..!

ಮಂಡ್ಯ : ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಹಗರಣ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಕುಮಾರಸ್ವಾಮಿ ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಹಗರಣ ಮಾಡಿದ್ದಾರೆ   ಎಂದು ಆರೋಪ  ಮಾಡಿದ್ದಾರೆ.

ಮೈಸೂರಿನ ಹಿನಕಲ್ ನಲ್ಲಿ 434 ಎಕರೆ ಜಾಗದಲ್ಲಿ ಹೊಸ ಬಡಾವಣೆ ಮಾಡಲು ಡಿನೋಟಿಫಿಕೇಶನ್ ಆಗುತ್ತದೆ. ಸಾಕಮ್ಮ ಎಂಬುವವರ ಹೆಸರಲ್ಲಿ ಸಿಎಂ ಅರ್ಜಿ ಹಾಕಿಸಿದ್ದಾರೆ. ಅರ್ಜಿ ಹಾಕಿದ 20 ದಿನಗಳೇ ನೋಟಿಫೀಕೇಶನ್ ಆಗುತ್ತದೆ. ಇದನ್ನು ಸಿಎಂ ಸಿದ್ದರಾಮಯ್ಯ ಖರೀದಿಸಿದ್ದಾರೆ ಎಂದು ಹೆಚ್ಡಿಕೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

17/4 ಸರ್ವೆ ನಂಬರ್ ದಾಖಲೆ ತೆಗೆದರೆ ಎಲ್ಲವೂ ಬಯಲಾಗುತ್ತದೆ. ಸತ್ಯಮೇವ ಜಯತೆ ಎಂದು ಹೇಳುವ ಸಿದ್ದರಾಮಯ್ಯ ಸಾಕಮ್ಮ ಎಂಬುವವರ ಹೆಸರಿನಲ್ಲಿ ಅರ್ಜಿ ಹಾಕಿಸುತ್ತಾರೆ. 20 ದಿನಗಳಲ್ಲಿ ಇದು ಡಿನೋಟಿಫಿಕೇಶನ್ ಆಗುತ್ತದೆ ಕುಮಾರಸ್ವಾಮಿ ಹೇಳಿದ್ದಾರೆ.ಮೈಸೂರಿನಲ್ಲಿ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಟೆನ್ಶನ್ ನಡುವೆ ಸಿಎಂ ವಿರುದ್ಧ ಹೆಚ್ಡಿಕೆ ಮತ್ತೊಂದು ಆರೋಪ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read