ರಾಯಚೂರು: ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿಯಾಗಿ ಕಾರ್ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ರಾಯಚೂರು ಹೊರವಲಯದ ಮನ್ಸಲಾಪುರ ಕ್ರಾಸ್ ಬಳಿ ಘಟನೆ ನಡೆದಿದೆ. ಉಡುಪಿಯಿಂದ ಕಾರ್ ನಲ್ಲಿ ಹೈದರಾಬಾದ್ ಗೆ ಕುಟುಂಬದವರು ತೆರಳುತ್ತಿದ್ದರು. ಅತಿ ವೇಗದ ಹಿನ್ನೆಲೆ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಹಾಜಿರಾ(65) ಮೃತಪಟ್ಟಿದ್ದು, ಇಶಾನ್ ಅಬ್ದುಲ್, ವಿಲಾನ್ ಇಸ್ಮಾಯಿಲ್, ಮಹಮ್ಮದ್ ಇಜಾನ್ ಹಾಗೂ ಮಹಮದ್ ಇಮ್ರಾನ್ ಗಾಯಗೊಂಡಿದ್ದಾರೆ.
ಕಾರ್ ನಲ್ಲಿದ್ದವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಟ್ರೇಶ್ವರ ನಿವಾಸಿಗಳಾಗಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.