ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ರಸ್ತೆಯಲ್ಲೇ ಬಲೆನೋ ಕಾರ್ ಹೊತ್ತಿ ಉರಿದ ಘಟನೆ ಗುಡಮಾರನಹಳ್ಳಿ ಸಮೀಪ ನಡೆದಿದೆ.
ಬೆಂಗಳೂರು ದಕ್ಷಿಣಾ ಜಿಲ್ಲೆ ಮಾಗಡಿ ತಾಲೂಕಿನ ಗುಡಮಾರನಹಳ್ಳಿ ಚೆಕ್ಪೋಸ್ಟ್ ಬಳಿ ಘಟನೆ ನಡೆದಿದೆ. ಮಾಗಡಿಯಿಂದ ನೆಲಮಂಗಲ ಕಡೆಗೆ ತೆರಳುತ್ತಿದ್ದ ಕಾರ್ ತಾಂತ್ರಿಕ ದೋಷದಿಂದ ಅಗ್ನಿಗಾಹುತಿಯಾಗಿದೆ. ಪೆಟ್ರೋಲ್ ಮತ್ತು ಸಿ.ಎನ್.ಜಿ. ಇಂಜಿನ್ ಹೊಂದಿದ್ದ ಬಲೆನೋ ಕಾರ್ ಇದಾಗಿದ್ದು, ಅದೃಷ್ಟವಶಾತ್ ಕಾರ್ ನಲ್ಲಿದ್ದ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
