BREAKING : ಕಾರು ಅಪಘಾತ : ಬಿಗ್ ಬಾಸ್ ಮಾಜಿ ಸ್ಪರ್ಧಿ ‘ಸೋನು ಗೌಡ’ ಆಸ್ಪತ್ರೆಗೆ ದಾಖಲು

ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನುಗೌಡ ಕಾರು ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಾರ್ಟ್ ಮೆಂಟ್ ನಲ್ಲಿ ನಿಲ್ಲಿಸಿದ್ದ ಕಾರು ತೆಗೆಯಲು ಹೋಗಿ ಬ್ರೇಕ್ ಬದಲು ಆ್ಯಕ್ಸಿಲೇಟರ್ ತುಳಿದಿದ್ದು, ಕಾರು ಪಿಲ್ಲರ್ ಕಂಬಕ್ಕೆ ಗುದ್ದಿದೆ ಎಂದು ಹೇಳಲಾಗುತ್ತಿದೆ. ಸೋನುಗೌಡಗೆ ಕಾರು ಅಷ್ಟಾಗಿ ಬರುತ್ತಿರಲಿಲ್ಲ, ಇತ್ತೀಚೆಗಷ್ಟೇ ಕಾರು ಕಲಿಯಲು ಆರಂಭಿಸಿದ್ದರು ಎನ್ನಲಾಗಿದೆ. ಪರಿಣಾಮ ಸೋನುಗೌಡ ಕೈ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರಿನ ಮುಂಭಾಗ ಕೂಡ ಸ್ವಲ್ಪ ಜಖಂ ಆಗಿದೆ. ಕಾರು ಅವರು ಚಲಾಯಿಸುತ್ತಿದ್ದರೋ, ಅಥವಾ ಬೇರೆ ಯಾರು ಚಲಾಯಿಸುತ್ತಿದ್ದರೋ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read