ಬೆಂಗಳೂರು: ವಕೀಲೆ ರಮ್ಯಾ ಮತ್ತು ಪುನೀತ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆ ಪೋಲೀಸರು ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ದಿನೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರಮ್ಯಾ ಮತ್ತು ಪುನೀತ್ ಸಾವಿನ ಪ್ರಕರಣದಲ್ಲಿ ದಿನೇಶ್ ಹೆಸರು ಕೇಳಿ ಬಂದಿತ್ತು.
ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾ(26) ಮೃತದೇಹ ಪತ್ತೆಯಾಗಿತ್ತು. ಶ್ರೀನಿವಾಸಪುರದ ಶೆಡ್ ನಲ್ಲಿ ವಕೀಲೆ ರಮ್ಯಾ ಶವ ಪತ್ತೆಯಾಗಿತ್ತು. ಕೆಂಪಲಿಂಗನಹಳ್ಳಿಯ ಮನೆಯಲ್ಲಿ ಪುನೀತ್(25) ಶವ ಪತ್ತೆಯಾಗಿತ್ತು. ರಮ್ಯಾ ಮನೆಯಲ್ಲಿಯೇ ವಾಸವಿದ್ದ ಪುನೀತ್ ಆತ್ಮಹತ್ಯೆಗೆ ಶರಣಾಗಿದ್ದ. ಉದ್ಯಮಿ ದಿನೇಶ್ ವಿರುದ್ಧ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ರಮ್ಯಾ ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ನೆಲಮಂಗಲ ಗ್ರಾಮಾಂತರ ಠಾಣೆ ಪೋಲೀಸರು ದಿನೇಶ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.