ಕೋಲಾರ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಅಣ್ಣ, ತಂಗಿ ಸಾವನ್ನಪ್ಪಿದ ಘಟನೆ ವೀರಾಪುರ ಗೇಟ್ ಸಮೀಪ ನಡೆದಿದೆ.
ಕೋಲಾರ ತಾಲೂಕಿನ ಶ್ರೀನಿವಾಸಪುರ ಸಮೀಪದ ವೀರಾಪುರ ಗೇಟ್ ಬಲಿ ಅಪಘಾತ ಸಂಭವಿಸಿದ್ದು, ಯಶಸ್ವಿನಿ ಬಾಯಿ ಮತ್ತು ಸಹೋದರ ಹರ್ಷಿತ್ ಸಾವನ್ನಪ್ಪಿದ್ದಾರೆ. ಕಾರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.