ನವದೆಹಲಿ: ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಸುತ್ತಲಿನ ನಿಗೂಢತೆಯು ಗುರುವಾರ ಅವರ ಆಪ್ತರಾದ ಇನ್ನಿಬ್ಬರು ಜನರನ್ನು ಬಂಧಿಸುವುದರೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.
ಸಹ ಸಂಗೀತಗಾರರಾದ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಸಹ ಗಾಯಕಿ ಅಮೃತಪ್ರಭಾ ಮಹಾಂತ ಅವರನ್ನು ವಶಕ್ಕೆ ಪಡೆಯಲಾಗಿದೆ. ಜುಬೀನ್ ಗರ್ಗ್ ನಿಧನರಾದಾಗ ಇಬ್ಬರೂ ಸಿಂಗಾಪುರದಲ್ಲಿದ್ದರು. ಅವರನ್ನು ವಶಕ್ಕೆ ಪಡೆಯಲು ಸಾಕಷ್ಟು ಪುರಾವೆಗಳು ಈಗ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.
ನಾವು ಅವರ ವಿರುದ್ಧ ಕೆಲವು ಪುರಾವೆಗಳನ್ನು ಕಂಡುಕೊಂಡಿದ್ದೇವೆ. ಆದ್ದರಿಂದ, ಹೆಚ್ಚಿನ ವಿಚಾರಣೆ ನಡೆಸಲು, ಅವರ ಬಂಧನ ಅಗತ್ಯವಾಗಿತ್ತು ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇವರ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಈಗ ಜೈಲಿನಲ್ಲಿದ್ದಾರೆ. ಬುಧವಾರ, ಗಾರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಮತ್ತು ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಾಂತ ಅವರನ್ನು ಬಂಧಿಸಲಾಗಿತ್ತು.