BREAKING : ಜೈನಮುನಿ `ಕಾಮಕುಮಾರನಂದಿ ಮಹರಾಜರ’ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಜೈನ ಮುನಿ ಕಾಮಕುಮಾರನಂದಿ ಮಹರಾಜರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,ನಾರಾಯಣ ಮಾಳಿ ಹಾಗೂ ಹಸನ್ ದಲಾಯತ್ ಇಬ್ಬರೂ ಸೇರಿಯೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿ ಠಾಣೆಯಲ್ಲಿ ದಾಖಲಾದ ಎಫ್ ಐಆರ್ ನಲ್ಲಿ ಮೊದಲು ಜೈನಮುನಿ ಅವರನ್ನು ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾರೆ. ಟವಲ್ ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದಾರೆ.ನಾರಾಯಣ ಮಾಳಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದು, ಸ್ನೇಹಿತ ಹಸನ್ ದಲಾಯತ್ ಎ2 ಆರೋಪಿಯಾಗಿದ್ದಾನೆ.

ನಾರಾಯಣ ಮಾಳಿಗೆ ಕೊಟ್ಟ ಹಣ ವಾಪಸ್ ಕೊಡುವಂತೆ ಜೈನಮುನಿಗಳು ಕೇಳಿದ್ದರು. ಇದರಿಂದ ಕೋಪಗೊಂಡಿದ್ದ ನಾರಾಯಣ ಮಾಳಿ, ಸ್ನೇಹಿತ ಹಸನ್ ದಲಾಯತ್ ಜೊತೆಗೆ ಸೇರಿ ಕೊಲೆ ಮಾಡಿದ್ದಾನೆ. ಕೊಲೆ ಮಡಿ ಶವವನ್ನು ಗೋಣಿ ಚೀಲದಲ್ಲಿ ಕಟ್ಟಿ ಬೈಕ್ ನಲ್ಲಿ ಕಟಕಬಾವಿವರೆಗೆ 35 ಕಿ.ಮಿ ಸಾಗಿಸಿದ್ದರು. ನಂತರ ಗ್ರಾಮದ ಕೊಳವೆ ಬಾವಿಗೆ ಶವವನ್ನು ಪೀಸ್ ಪೀಸ್ ಮಾಡಿ ಬೀಸಾಕಿದ್ದರು. ಜೊತೆಗೆ ಜೈನಮುನಿ ಗೆ ಸೇರಿದ ಬಟ್ಟೆ ಹಾಗೂ ಡೈರಿಯನ್ನು ಸುಟ್ಟುಹಾಕಿದ್ದಾರೆ. ಸದ್ಯ ಪೊಲೀಸರು ಜೈನಮುನಿ ಡೈರಿಯಲ್ಲಿ ಏನು ಬರೆದಿದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read