ಕಲಬುರಗಿ: ಖನಿಜ ನಿಗಮದ ಎಂಡಿ ಮಹಾಂತೇಶ್ ಬಿಳಗಿ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮಹಾಂತೇಶ್ ಬಿಳಗಿ ಅವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ಬೈಪಾಸ್ ಬಳಿ ಇನೋವಾ ಕಾರ್ ಅಪಘಾತಕ್ಕೀಡಾಗಿದೆ. ಖನಿಜ ನಿಗಮದ ಎಂಡಿ ಪ್ರಯಾಣಿಸುತ್ತಿದ್ದ ಕಾರ್ ನಲ್ಲಿದ್ದ ಐದು ಜನರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
