BREAKING : ಬೆಂಗಳೂರು ಕಟ್ಟಡ ಕುಸಿತ ಪ್ರಕರಣ : ಮತ್ತೋರ್ವ ಕಾರ್ಮಿಕನ ಶವ ಪತ್ತೆ, ಮೃತರ ಸಂ‍ಖ್ಯೆ 9 ಕ್ಕೇರಿಕೆ.!

ಬೆಂಗಳೂರು : ಬೆಂಗಳೂರು ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂ‍ಖ್ಯೆ 9 ಕ್ಕೇರಿಕೆಯಾಗಿದೆ. ಕಟ್ಟಡದ ಬಳಿ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಮತ್ತೋರ್ವ ಕಾರ್ಮಿಕನ ಶವ ಪತ್ತೆಯಾಗಿದೆ. ಈ ಮೂಲಕ ಮೃತರ ಸಂ‍ಖ್ಯೆ 9 ಕ್ಕೇರಿಕೆಯಾಗಿದೆ.

ಬೆಂಗಳೂರಿನ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಸಂಭವಿಸಿತ್ತು. ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದಿದ್ದಾರೆ.

ಕಟ್ಟಡ ಮಾಲೀಕ ಭುವನ್ ರೆಡ್ಡಿ 4 ಅಂತಸ್ತಿನವರೆಗೆ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿದ್ದರು. ಆದರೆ 6 ಅಂತಸ್ತಗಳನ್ನು ನಿರ್ಮಿಸಲಾಗಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಕಟ್ಟಡ ಕುಸಿದಿದ್ದು, ಕಟ್ಟಡದ ಮಾಲೀಕ ಭುವನ್ ರೆಡ್ಡಿ ಹಾಗೂ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read