ಬೆಂಗಳೂರು: ರಾಮಯ್ಯನ ಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಜಾಮೀನು ರದ್ದುಪಡಿಸಲಾಗಿದೆ.
ದೊಡ್ಡಬಳ್ಳಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಜಾಮೀನು ಕ್ಯಾನ್ಸಲ್ ಮಾಡಲಾಗಿದೆ. ನ್ಯಾಯಾಧೀಶರು ಜಾಮೀನು ರದ್ದುಪಡಿಸಿ ಇಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಅವರು ಜಾಮೀನು ಪಡೆದ ಬಳಿಕವೂ ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದರು ಎಂದು ಆರೋಪಿಸಲಾಗಿತ್ತು.
ಕಳೆದ ಶನಿವಾರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಪ್ರಥಮ್ ದೂರು ನೀಡಿದ್ದರು. ಪ್ರಥಮ್ ದೂರಿನ ಪ್ರತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಜಾಮೀನು ಕ್ಯಾನ್ಸಲ್ ಮಾಡಲಾಗಿದೆ. ಬೇಕರಿ ರಘು, ಯಶಸ್ವಿನಿ ಅವರು ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.