BREAKING : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ ಸಂಚು : ನಿವಾಸದ ಬಳಿ ಕಬ್ಬಿಣದ ಏಣಿ ಪತ್ತೆ.!

ಮುಂಬೈ : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ  ಸಂಚು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಹೌದು, ಮೂಲಗಳ ಪ್ರಕಾರ ದುಷ್ಕರ್ಮಿಗಳು ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಟ ಶಾರೂಖ್ ಖಾನ್ ನಿವಾಸ ಮನ್ನತ್ ಬಳಿ ಬಳಿ ಕಬ್ಬಿಣದ ಏಣಿ ಪತ್ತೆಯಾಗಿದ್ದು, ಏಣಿ ಬಳಸಿ ದುಷ್ಕರ್ಮಿಗಳು ಶಾರೂಖ್ ಮನೆ ನುಗ್ಗಲು ಸ್ಕೆಚ್ ಹಾಕಿದ್ದರು. ಆದರೆ ನಟ ಶಾರೂಖ್ ಖಾನ್ ಇದುವರೆಗೆ ಯಾವುದೇ ದೂರು ನೀಡಿಲ್ಲ.

ಸೈಫ್ ಮೇಲೆ ದಾಳಿ ನಡೆಯುವ 3-4 ದಿನದ ಹಿಂದೆ ನಟ ಶಾರೂಖ್ ಖಾನ್ ಮೇಲೂ ದಾಳಿ ನಡೆಸಲು ಗ್ಯಾಂಗ್ ಸ್ಕೆಚ್ ಹಾಕಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ.

ಸದ್ಯ, ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ .ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ.ಬಾಲಿವುಡ್ ಸ್ಟಾರ್ ನಟರನ್ನೇ ದುಷ್ಕರ್ಮಿಗಳು ಟಾರ್ಗೆಟ್ ಮಾಡುತ್ತಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಗಳು ಬಂದಿತ್ತು. ನಂತರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು. ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಮಾಡಿದ ಹಲವಾರು ಬೆದರಿಕೆಗಳ ನಂತರ ಶಾರೂಖ್ ಖಾನ್ ಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕಲಾಗಿದೆ.

ತಮ್ಮ ಅನೇಕ ಪಾತ್ರಗಳ ಅಭಿನಯಗಳಿಂದಾಗಿ ವ್ಯಾಪಕ ಕೀರ್ತಿಗೆ ಪಾತ್ರರಾದ ನಟ ಶಾರುಖ್ ಖಾನ್ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರೋದ್ಯಮದಲ್ಲಿನ ತನ್ನ ಕಾಲದಲ್ಲಿ, ಖಾನ್ ಅತ್ಯುತ್ತಮ ನಟ ವಿಭಾಗದಲ್ಲಿನ ಏಳು ಪ್ರಶಸ್ತಿಗಳೂ ಸೇರಿದಂತೆ ಹದಿಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read