BREAKING : ಸೇನಾ ಮಾದರಿಯಲ್ಲಿ ಯುವಕರಿಗೆ ‘ಗನ್ ತರಬೇತಿ’ : ಶ್ರೀರಾಮಸೇನೆಯ 27 ಮಂದಿ ಕಾರ್ಯಕರ್ತ ವಿರುದ್ಧ ‘FIR’ ದಾಖಲು.!

ಬಾಗಲಕೋಟೆ : ಸೇನಾ ಮಾದರಿಯಲ್ಲಿ ಯುವಕರಿಗೆ ಗನ್ ತರಬೇತಿ ನೀಡಿದ ಆರೋಪದಡಿ 27 ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಡಿ.9 2024 ರಿಂದ ಶ್ರೀರಾಮಸೇನೆಯಿಂದ ಯುವಕರಿಗೆ ವ್ಯಕ್ತಿತ್ವ ವಿಕಸನ ಅಭ್ಯಾಸ ವರ್ಗ ತರಬೇತಿ ನೀಡಲಾಗಿದೆ. ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗಿದೆ. ದಂಡ ಪ್ರಯೋಗ, ನಕಲಿ ಗನ್ ಮೂಲಕ ಗನ್ ಟ್ರೈನಿಂಗ್, ಕರಾಟೆ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿದೆ. ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ತರಬೇತಿ ಶಿಬಿರ ನಡೆಸಲಾಗಿದೆ.ಶ್ರೀರಾಮಸೇನೆ ಕಾರ್ಯಕರ್ತರಾದ ಪ್ರಕಾಶ್ ಪತ್ತಾರ್, ಯಮನಪ್ಪ ಕೋರಿ, ಗಂಗಾಧರ ಕುಲಕರ್ಣಿ ಸೇರಿ ಒಟ್ಟು 27 ಮಂದಿ ವಿರುದ್ಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read