BREAKING : ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಮತ್ತೊಂದು ಬಲಿ : ನೀರಿನ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸಾವು.!

ಬೆಂಗಳೂರು : ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದ್ದು, ನೀರಿನ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಲಿಫ್ಟ್ ನಿರ್ಮಿಸಲು ಅಗೆದಿದ್ದ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸುಹಾಸ್ ಮೃತಪಟ್ಟ ಘಟನೆ ನಗರದ ಕಾಡುಗೋಡಿಯಲ್ಲಿ ನಡೆದಿದೆ.

ಕಾಡುಗೋಡಿಯ ಕನ್ನಮಂಗಲದಲ್ಲಿ ನಿರ್ಮಾಣದ ಹಂತದ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು, ಈ ವೇಳೆ ಲಿಫ್ಟ್ ನಿರ್ಮಿಸಲು ಗುಂಡಿಯೊಂದನ್ನು ತೆಗೆಯಲಾಗಿತ್ತು. ಆ ಗುಂಡಿಗೆ ನೀರು ತುಂಬಿತ್ತು. ಆಟವಾಡುತ್ತಾ ಹೋದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕೆಂಗೇರಿ  ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ಇಬ್ಬರು ಮೃತಪಟ್ಟಿದ್ದರು . ಈ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read