ಬೆಂಗಳೂರು : ಕಾಲ್ತುಳಿತ ದುರಂತದ ಬೆನ್ನಲ್ಲೇ ‘KSCA’ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಬಾಕಿ 10 ಕೋಟಿ ಜಾಹೀರಾತು ತೆರಿಗೆ ಜೊತೆ, ದಂಡ ವಸೂಲಿಗೆ ಬಿಬಿಎಂಪಿ ಸಿದ್ದತೆ ನಡೆಸಿದೆ.
ಹೌದು. 10 ಕೋಟಿ ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದ್ದ ‘KSCA’ ಗೆ ಈ ಹಿಂದೆ ಬಿಬಿಎಂಟಿ ನೋಟಿಸ್ ನೀಡಿತ್ತು. ಆದರೆ ನೋಟಿಸ್ ಕೊಟ್ಟಿದ್ದರೂ ತೆರಿಗೆ ಹಣ ಪಾವತಿಸರಲಿಲ್ಲ. ಇದೀಗ ಬಾಕಿ ತೆರಿಗೆ ಹಣದ ಜೊತೆ ದಂಡ ವಸೂಲಿಗೆ ಬಿಬಿಎಂಪಿ ಸಿದ್ದತೆ ನಡೆಸಿದೆ. ತೆರಿಗೆ ಹಣ ಕಟ್ಟದಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರು ಕಾಲ್ತುಳಿತ ದುರಂತದ ಬಳಿಕ ‘KSCA’ ಸೆಕ್ರೆಟರಿ ಸ್ಥಾನಕ್ಕೆ ಶಂಕರ್ ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಅದೇ ರೀತಿ KSCA ಖಜಾಂಚಿ ಸ್ಥಾನಕ್ಕೆ ಜೈರಾಮ್ ಕೂಡ ರಾಜೀನಾಮೆ ನೀಡಿದ್ದಾರೆ. ಇಬ್ಬರು ಕೂಡ ನೈತಿಕ ಹೊಣೆ ಹೊತ್ತು ನಿನ್ನೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಘಟನೆಗೆ ದೇಶಾದ್ಯಂತ ಜನರು ಮರುಗಿ ಕಂಬನಿ ಮಿಡಿದಿದ್ದಾರೆ. ದುರಂತಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
