ಕಲಬುರಗಿ : ಕುಡಿತದ ಚಟ ಬಿಡಲು ಔಷಧಿ ಸೇವಿಸಿದ್ದ ಮತ್ತೋರ್ವ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4 ಕ್ಕೇರಿಕೆಯಾಗಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಚಿಕಿತ್ಸೆ ಫಲಿಸದೇ ಮನೋಹರ (30) ಎಂಬ ಯುವಕ ಮೃತಪಟ್ಟಿದ್ದಾನೆ.
ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮೀನರಸಿಂಹಲು(45), ಶಹಾಬಾದ ಪಟ್ಟಣದ ಗಣೇಶ್ ಬಾಬು ರಾಥೋಡ(24), ಮದಗಲ್ ಗ್ರಾಮದ ನಾಗೇಶ ಭೀಮೇಶಪ್ಪ ಗಡಗು(25) ಮೃತಪಟ್ಟವರು. ಕುಡಿತದ ಚಟದಿಂದ ಮುಕ್ತಿ ಹೊಂದಲು ಇವರು ನಾಟಿ ಔಷಧ ಸೇವಿಸಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.