ನವದೆಹಲಿ: ಜಮ್ಮುವಿನಲ್ಲಿ ಮುಂದಿನ ಆದೇಶದವರೆಗೂ ರೈಲು ಸಂಚಾರ ಬಂದ್ ಮಾಡಲಾಗಿದೆ. ರೈಲು ಬೋಗಿಗಳ ಒಳಗೂ ಬ್ಲಾಕ್ ಔಟ್ ಮಾಡಲಾಗಿದ್ದು, ಜಮ್ಮುವಿನಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ರೈಲುಗಳಲ್ಲಿರುವ ವಿದ್ಯುತ್ ದೀಪಗಳನ್ನು ಬಂದ್ ಮಾಡಲಾಗಿದೆ. ರೈಲುಗಳಲ್ಲಿ ಪ್ರಯಾಣಿಕರು ಮೊಬೈಲ್ ಲೈಟ್ ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಭಾರತದ ಮೂರು ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿಗೆ ಪ್ರಯತ್ನಿಸಿದೆ. ಮೂರು ರಾಜ್ಯಗಳ ವಿವಿಧ ನಗರಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸುತ್ತಿದ್ದು, ಜಮ್ಮುವಿನಲ್ಲಿ ಮುಂದಿನ ಆದೇಶದವರೆಗೂ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.