BREAKING : ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯದ ವಿಗ್ರಹಗಳ ಧ್ವಂಸ : ಆರೋಪಿ ಬಂಧನ

ಡಾಕಾ : ಬಾಂಗ್ಲಾದೇಶದ ಬ್ರಹ್ಮನ್ಬಾರಿಯಾ ಜಿಲ್ಲೆಯ ಹಿಂದೂ ದೇವಾಲಯದಲ್ಲಿ 36 ವರ್ಷದ ವ್ಯಕ್ತಿಯೊಬ್ಬ ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ನಿಯಾಮತ್ಪುರ ಗ್ರಾಮದಲ್ಲಿರುವ ನಿಯಾಮತ್ ಪುರ್ ದುರ್ಗಾ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಖಲೀಲ್ ಮಿಯಾ ಎಂದು ಗುರುತಿಸಲಾಗಿದೆ.

ಖಲೀಲ್ ಮಿಯಾ ಬಂಧನವನ್ನು ದೃಢಪಡಿಸಿರುವ ಬ್ರಹ್ಮನ್ಬಾರಿಯಾ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಶಾಖಾವತ್ ಹುಸೇನ್, ಖಲೀಲ್ ಮಿಯಾ ಅವರ ಕೃತ್ಯದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದ್ದಾರೆ. ಅವರು ಅಂತಹ ಕೃತ್ಯವನ್ನು ಏಕೆ ನಡೆಸಿದ್ದಾರೆ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read