ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಂಪೌಂಡ್ ಗೆ ಗುದ್ದಿದೆ. ಕಾರ್ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಬಸವನಗುಡಿಯ ವಾಸವಿ ಶಾಲೆಯ ಬಳಿ ಘಟನೆ ನಡೆದಿದೆ. ಬೈಕ್ ಗೆ ಡಿಕ್ಕಿ ತಪ್ಪಿಸಲು ಹೋಗಿ ಕಾಂಪೌಂಡ್ ಗೆ ಕಾರ್ ಡಿಕ್ಕಿಯಾಗಿದೆ. ಛತ್ತೀಸ್ ಗಢ ನೋಂದಣಿಯ ಬೆಂಜ್ ಕಾರ್ ಅಪಘಾತಕ್ಕೀಡಾಗಿದೆ.
ಮದ್ಯ ಸೇವಿಸಿ ಪ್ರಣಯ್ ಜೈನ್ ಕಾರ್ ಚಲಾಯಿಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ನೇತಾಜಿ ನಗರ ನಿವಾಸಿ ಪ್ರಣಯ್ ಜೈನ್ ಅಪಘಾತವೆಸಗಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್, ಒಂದು ಕಾರ್ ಗೂ ಹಾನಿಯಾಗಿದೆ. ಬಸವನಗುಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
