ಕೋಲಾರ: ಮನೆಯಲ್ಲಿದ್ದ ಒಂದು ಕೆಜಿ 300 ಗ್ರಾಂ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯನಗರದಲ್ಲಿ ಘಟನೆ ನಡೆದಿದೆ. ವ್ಯಾಪಾರಿ ಸುನಿಲ್ ಕುಮಾರ್ ಎಂಬುವವರ ಮನೆಯ ಬೀಗ ಒಡೆದು ಕಳ್ಳರು ಕೃತ್ಯವೆಸಗಿದ್ದಾರೆ.
ನಿನ್ನೆ ಸುನಿಲ್ ಕುಮಾರ್ ಕುಟುಂಬದವರು ಬೆಂಗಳೂರಿಗೆ ಹೋಗಿದ್ದಾಗ ಕಳವು ಮಾಡಲಾಗಿದೆ. ಭಾರಿ ಮಳೆ ಆಗುತ್ತಿದ್ದ ವೇಳೆ ಮನೆಯ ಬೀಗ ಒಡೆದು ಕಳ್ಳರು ಕೃತ್ಯವೆಸಗಿದ್ದಾರೆ. ಮನೆಯ ಬಾಗಿಲು ಮುರಿದಿರುವ ಬಗ್ಗೆ ಅಕ್ಕಪಕ್ಕದವರು ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.