ಎರಡು ಹೆಲಿಕಾಪ್ಟರ್ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ್ದಾರೆ. ಫಿನ್ ಲ್ಯಾಂಡಿನ ಕೌಟುವಾ ಪಟ್ಟಣದ ಬಳಿ ಘಟನೆ ನಡೆದಿದೆ. ಯುರಾ ವಿಮಾನ ನಿಲ್ದಾಣ ಸಮೀಪ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಗಳು ಡಿಕ್ಕಿಯಾಗಿವೆ.
ಫಿನ್ಲ್ಯಾಂಡ್ನಲ್ಲಿ ಎರಡು ಹೆಲಿಕಾಪ್ಟರ್ಗಳು ಆಕಾಶದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಎಸ್ಟೋನಿಯನ್ ಉದ್ಯಮಿಗಳು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ.
ಫಿನ್ಲ್ಯಾಂಡ್ನ ಪಶ್ಚಿಮ ಯುರಾ ಪ್ರಾಂತ್ಯದ ಮೇಲೆ ಶನಿವಾರ ಎರಡು ಹೆಲಿಕಾಪ್ಟರ್ಗಳು ಆಕಾಶದಲ್ಲಿ ಡಿಕ್ಕಿ ಹೊಡೆದು ನಂತರ ಹೆಲಿಕಾಪ್ಟರ್ಗಳು ನೆಲಕ್ಕೆ ಅಪ್ಪಳಿಸಿದವು. ಎರಡು ಹೆಲಿಕಾಪ್ಟರ್ಗಳಲ್ಲಿ ಐದು ಜನರಿದ್ದರು ಎಂದು ಫಿನ್ನಿಷ್ ಪೊಲೀಸರು ತಿಳಿಸಿದ್ದಾರೆ.
ಎಸ್ಟೋನಿಯನ್ ಉದ್ಯಮಿಗಳಾದ ಪವನ ಶಕ್ತಿ ಪ್ರವರ್ತಕ ಒಲೆಗ್ ಸ್ನಾಜಲ್ಗ್ ಮತ್ತು ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಪ್ರಿಯತ್ ಜಾಗಂತ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಒಂದು ಹೆಲಿಕಾಪ್ಟರ್ನಲ್ಲಿ ಮೂವರು ಪ್ರಯಾಣಿಕರಿದ್ದರು ಮತ್ತು ಇನ್ನೊಂದರಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಎರಡೂ ಹೆಲಿಕಾಪ್ಟರ್ಗಳು ಎಸ್ಟೋನಿಯಾದ ರಾಜಧಾನಿ ಟ್ಯಾಲಿನ್ನಿಂದ ಹೊರಟು ಯುರಾ ವಿಮಾನ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕೊಕೆಮಕಿಯಲ್ಲಿರುವ ಪಿಕಾಜಾರ್ವಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದವು. ಹೆಲ್ಸಿಂಕಿಯ ಪಶ್ಚಿಮಕ್ಕೆ ಮಧ್ಯಾಹ್ನದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಎರಡು ಹೆಲಿಕಾಪ್ಟರ್ಗಳು ಯುರಾ ವಿಮಾನ ನಿಲ್ದಾಣದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ಪತ್ತೆಯಾಗಿವೆ. ತುರ್ತು ಸೇವೆಗಳು ಸುರಕ್ಷಿತವಾಗಿ ಚಲಿಸಲು ವಿಮಾನ ನಿಲ್ದಾಣದ ಪ್ರವೇಶ ರಸ್ತೆಗಳನ್ನು ಮುಚ್ಚಲಾಗಿದೆ.