ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಬಳಿಕ ಮತ್ತೊಂದು ಇರಿತ ಘಟನೆ ಶುಕ್ರವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇದೇ ಹೊತ್ತಲ್ಲೇ ಪಾಣೆಮಂಗಳೂರು ಸಮೀಪ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ಒಂದು ಕೋಮುವಿನ ಯುವಕನಿಗೆ ನಾಲ್ವರ ತಂಡ ಚಾಕುವಿನಿಂದ ಇರಿದು ಬೈಕ್ ನಲ್ಲಿ ಪರಾರಿಯಾಗಿದೆ.
ಪೈಂಟರ್ ವೃತ್ತಿ ಮಾಡಿಕೊಂಡಿರುವ ಬಂಟ್ವಾಳದ ಹಮೀದ್ ಯಾನೆ ಅಮ್ಮಿ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ತರಾರಿಯಾಗಿದ್ದಾರೆ. ಹಮೀದ್ ಅವರ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.