ಬೆಂಗಳೂರು : ವೇತನ ನೀಡದೇ ಕಿರುಕುಳ ನೀಡಿದ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಓಲಾ ಕಂಪನಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅರವಿಂದ್ ಎಂಬುವವರು ಸೆ.28 ರಂದು ವಿಷ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದರು. ಸೂಸೈಡ್ ಮಾಡಿಕೊಂಡ ಮೇಲೆ ಅವರ ಖಾತೆಗೆ ವೇತನ ಜಮೆ ಆಗಿದೆ ಎನ್ನಲಾಗಿದೆ. ಒಟ್ಟು 17 ಲಕ್ಷ 46 ಸಾವಿರ ಹಣ ಅವರ ಖಾತೆಗೆ ಜಮಾ ಆಗಿದೆ. ಘಟನೆ ಸಂಬಂಧ ಓಲಾ ಕಂಪನಿ ಸಿಇಒ, ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ವೇತನ, ಭತ್ಯೆ ನೀಡದೇ ಕಿರುಕುಳ ನೀಡಲಾಗಿದೆ ಎಂದು ಡೆತ್ ನೋಟ್ ನಲ್ಲಿ ಅರವಿಂದ್ ಉಲ್ಲೇಖಿಸಿದ್ದಾರೆ.ಓಲಾ ಸಂಸ್ಥೆಯ ಸಿಇಒ ಭವೇಶ್ ಅಗರ್ವಾಲ್ ಮತ್ತು ಹಿರಿಯ ಸಿಬ್ಬಂದಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಇದೀಗ ಸುಬ್ರಮಣಿಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
You Might Also Like
TAGGED:ಓಲಾ