ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿ ನಡೆದ ಘಟನೆ ರಾಮನಗರದ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ.
ಮುತ್ತಪ್ಪ ರೈ ನಿವಾಸದ ಸಮೀಪ ಅಪರಿಚಿತರು ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ಗುಂಡು ತಗುಲಿ ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗಾಯಗಳಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡರಾತ್ರಿ ಬಿಡದಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಾಗ ದಾಳಿ ನಡೆದಿದೆ. ಮಧ್ಯರಾತ್ರಿ 12.50ರ ಸುಮಾರಿಗೆ ರಿಕ್ಕಿ ಮೇಲೆ ದಾಳಿ ನಡೆದಿದೆ. .2 ದಿನಗಳ ಹಿಂದಷ್ಟೇ ರಿಕ್ಕಿ ರೈ 2ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಿಡದಿಯ ಮುತ್ತಪ್ಪ ರೈ ನಿವಾಸದಲ್ಲಿ ರಿಕ್ಕಿ, ಒಬ್ಬರೇ ವಾಸವಾಗಿದ್ದರು..
KA53 MC 7128 ನಂಬರ್ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ಅವರು ಬಿಡದಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಾಗ ದಾಳಿ ನಡೆದಿದೆ. ಹಿಂಬದಿ ಸೀಟಿನಲ್ಲಿ ರಿಕ್ಕಿ ರೈ ಕುಳಿತಿದ್ದರು. ಫೈರಿಂಗ್ ಮಾಡುತ್ತಿದ್ದಂತೆ ಡ್ರೈವಿಂಗ್ ಸೀಟ್ಗೆ ಗುಂಡು ತಗುಲಿದೆ. ಸೀಟ್ಗೆ ಬಡಿದ ಗುಂಡುಗಳು ಹಿಂಬದಿಯಲ್ಲಿ ಕೂತಿದ್ದ ರಿಕ್ಕಿಗೂ ತಗುಲಿದೆ.ಕೂದಲೆಳೆ ಅಂತರದಲ್ಲಿ ರಿಕ್ಕಿ ಕಾರು ಚಾಲಕ ರಾಜು ಪಾರಾಗಿದ್ದಾರೆ.