ಬೆಂಗಳೂರು : ರಾಜ್ಯ ಸರ್ಕಾರ 540 ಗಸ್ತು ಅರಣ್ಯ ಪಾಲಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರಣ್ಯ ರಕ್ಷಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯ ಅಂಗವಾಗಿ ಅರಣ್ಯ ಇಲಾಖೆಯ ಎಲ್ಲಾ 13 ವೃತ್ತಗಳಲ್ಲಿ ದಿನಾಂಕ:20.07.2025ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯ ನಂತರ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ ಷೆಡ್ಯೂಲ್-1ರ ಕ್ರ.ಸಂ. 14ರ ಕಂಡಿಕೆ (6) r/w (7)ರನ್ವಯ ವೃತ್ತವಾರು (ಕರಡು) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಅನುಬಂಧ-1 ರಿಂದ 13ರಲ್ಲಿ ಈ ಪ್ರಕಟಣೆಯೊಂದಿಗೆ ಅಭ್ಯರ್ಥಿಗಳ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ www.aranya.gov.inನಲ್ಲಿ ಈ ಮೂಲಕ ಪ್ರಕಟಿಸಲಾಗಿದೆ.
ಪ್ರಕಟಿಸಿದ (ಕರಡು) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗಳ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ, ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮೂಲ ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ವಿಳಾಸದಿಂದ ಮಾತ್ರ ಆಕ್ಷೇಪಣೆಗಳನ್ನು ಈ ಕೆಳಕಂಡ ನಮೂನೆಯಲ್ಲಿ , 2-‘540fg.rec.17.11.2023@gmail.com’
ದಿನಾಂಕ:20.10.2025ರೊಳಗೆ ಸಲ್ಲಿಸತಕ್ಕದ್ದು ಎಂದು ಸೂಚನೆ ನೀಡಿದೆ.















