ಬೆಂಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಕುಲಸಚಿವ ಪ್ರೊ.ಬಿಸಿ ಮೈಲಾರಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ವಿವಿಯಲ್ಲಿ ಕುಲಸಚಿವರಾಗಿದ್ದ ಅವರು ಲೈಂಗಿಕ ಸಂಪರ್ಕ ಬೆಳೆಸಲು ಮಹಿಳೆಗೆ ಒತ್ತಾಯಿಸಿರುವ ಆರೋಪ ಕೇಳಿಬಂದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ಕರೆ ಮಾಡಿದ ಮೈಲಾರಪ್ಪ ಲೈಂಗಿಕ ಸಂಪರ್ಕಕ್ಕೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಠಾಣೆ ಪೊಲೀಸರು ಮೈಲಾರಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗಂಡ ಇಲ್ಲದ ಮಹಿಳೆಯೊಬ್ಬರು 2022 ರಿಂದ ಮೈಲಾರಪ್ಪನ ಸಂಪರ್ಕದಲ್ಲಿದ್ದರು. ಅಂದರೆ ಅವರು ಕೆಲಸ ಮಾಡಿದ ಸಂಸ್ಥೆಯಲ್ಲಿ ಮಹಿಳೆಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲೈಂಗಿಕ ಸಂಪರ್ಕ ಬೆಳೆಸಲು ಮಹಿಳೆಗೆ ಒತ್ತಾಯಿಸಿ ಬೆದರಿಕೆ ಹಾಕಿದ ಹಿನ್ನೆಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 
			 
		 
		 
		 
		 Loading ...
 Loading ... 
		 
		