BREAKING : ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’ ನಟಿ ಬಿ.ಸರೋಜಾದೇವಿ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ |B.Saroja Devi Funeral


ಬೆಂಗಳೂರು : ಭಾರತೀಯ ಚಿತ್ರರಂಗದ ‘ಅಭಿನಯ ಸರಸ್ವತಿ’, ಹಿರಿಯ ನಟಿ ಬಿ.ಸರೋಜಾದೇವಿ ಇನ್ನೂ ನೆನಪು ಮಾತ್ರ. ಹೌದು. ಸರೋಜಾದೇವಿ ಅವರ ಹುಟ್ಟೂರು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರದಲ್ಲಿ ಇಂದು ಅವರ ಅಂತ್ಯಕ್ರಿಯೆ ನೆರವೇರಿದೆ. ಒಕ್ಕಲಿಗ ಸಂಪ್ರದಾಯದಂತೆ ಅವರನ್ನ ಮಣ್ಣು ಮಾಡಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪುತ್ರ ಗೌತಮ್ ಅಂತಿಮ ವಿಧಿ ವಿಧಾನ ಪೂರೈಸಿದರು.  ಇದಕ್ಕೂ ಮುನ್ನ ಪೊಲೀಸರು ಕುಶಾಲ ತೋಪು ಸಿಡಿಸಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸರೋಜಾದೇವಿ ಕುಟುಂಬಸ್ಥರು, ಗಣ್ಯರು, ಅಭಿಮಾನಿಗಳು ನೆರೆದಿದ್ದರು.

ಬೆಂಗಳೂರಿನ ನಿವಾಸದಿಂದ ಇಂದು ಚನ್ನಪಟ್ಟಣಕ್ಕೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಯಿತು. ದಶಾವರ ಗ್ರಾಮದ ತೋಟದಲ್ಲಿ ಇರುವ ಸರೋಜಾದೇವಿಯವರ ತಾಯಿ ರುದ್ರಮ್ಮನವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರ ತಾರೆಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ “ಅಭಿನಯ ಸರಸ್ವತಿ” (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು.

ರಾಜ್ಯ ಪ್ರಶಸ್ತಿಗಳು

  • ೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ
  • ೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
  • ೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
  • ೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
  • ೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
  • ೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
  • ೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
  • ೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
  • ೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read